...

ಯಲ್ಲಾಪುರ ನ.18 : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಗದ್ದೆ ಗ್ರಾಮದ ಶ್ರೀ ಕ್ಷೇತ್ರ ಶ್ರೀ ನಾಗಚೌಡೇಶ್ವರಿ ದೇವಾಲಯಕ್ಕೆ ತೆರಳಲು ನೂತನವಾಗಿ ಸಿ.ಸಿ.ರಸ್ತೆಯನ್ನು ಉದ್ಘಾಟಿಸಿದರು.

ನಂತರ ಶ್ರೀ ನಾಗಚೌಡೇಶ್ವರಿ ದೇವಾಲಯದ ಆವರಣದಲ್ಲಿ " ಅನ್ನಛತ್ರ " ನಿರ್ಮಾಣ ಕಾಮಗಾರಿಗೆ ಭೂಮಿಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಿದರು, ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸಚಿವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ  ಕಂಪ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ವಿನಾಯಕ ನಾಯ್ಕ, ಹಾಸಣಗಿ ಗ್ರಾಮಪಂಚಾಯತ ಅಧ್ಯಕ್ಷರಾದ ಪುರಂದರ ನಾಯ್ಕ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಚಂದ್ರಶೇಖರ ಮೊಗೇರ್, ಸ್ಥಳೀಯ ಪ್ರಮುಖರಾದ ಶ್ರೀ ವಿನೋದ ನಾಯ್ಕ, ಶ್ರೀ ಆರ್.ಎಲ್.ಭಟ್, ಶ್ರೀ ಸದಾನಂದ ಮೊಗೇರ ಹಾಗೂ ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.

...

..

...

.