...

ಹಾವೇರಿ ನ. 08 : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ನಗರದ ಸಜ್ಜನರ್ ಹಾಲ್ ನಲ್ಲಿ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆಯೋಜಿಸಿದ್ದ " ವಿಸ್ತಾರ ಕನ್ನಡ ಸಂಭ್ರಮ " ವನ್ನು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನನಗೆ ವಿಸ್ತಾರ ಬಳಗದೊಂದಿಗೆ ಅವಿನಾಭಾವ ಸಂಬಂಧವಿದೆ ಹಿರಿಯ ಪತ್ರಕರ್ತರಾದ ಕೋಣೆಮನೆಯವರು ನಾವೆಲ್ಲರೂ ಒಂದೇ ಊರಿನವರು ಹಾಗೂ ಆತ್ಮೀಯ ಸ್ನೇಹಿತರು ಅವರ ವಿಸ್ತಾರ ಸುದ್ದಿ ಮಾಧ್ಯಮವು ರಾಜ್ಯದ ಜನತೆಯ ಮನೆ ಮನಗಳಲ್ಲಿ ವಿಸ್ತರಿಸಲಿ ಎಂದು ಶುಭ ಹಾರೈಸಿದರು.

ಈ ಸಮಾರಂಭದಲ್ಲಿ ಸ್ಥಳೀಯ ಮುಖಂಡರು, ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಪ್ರಮುಖರು, ಕನ್ನಡ ಸಾಹಿತ್ಯ ಪರಿಷತ್ತುನ ಪದಾಧಿಕಾರಿಗಳು, ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

...