...

ಬೆಂಗಳೂರು ಸೆ, 13 : ಉತ್ತರಕನ್ನಡ ಜಿಲ್ಲೆಯ ಕುಳುವಾಡಿ ಮರಾಟಿ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಹಾಗೂ ಅರೇರಾ ಸಮುದಾಯವನ್ನು ಮರಾಠ ಉಪಜಾತಿಗೆ ಸೇರಿಸುವಂತೆ ಇಂದು ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರ ನೇತೃತ್ವದ ನಿಯೋಗವು ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷರಾದ ಶ್ರೀ  ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಹಾಗೂ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ, ಮದನೂರ, ಕಿರವತ್ತಿ, ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮರಾಠಿ ಜಾತಿ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಸಮಸ್ಯೆ ಉಂಟಾಗುತ್ತಿದೆ.ಶೂದ್ರ ಮರಾಠಿ ಜಾತಿ ಪ್ರಮಾಣ ಪತ್ರ ನೀಡುವಾಗ ನಾಡ ಕಛೇರಿ ತಂತ್ರಾಂಶದಲ್ಲಿ ಶೂದ್ರ ಮರಾಠಿ ಇರುವುದಿಲ್ಲ  ಕೆಲವೊಂದು ಸಂದರ್ಭಗಳಲ್ಲಿ ಅಭ್ಯರ್ಥಿಯ ಜಾತಿ ಕುಳುವಾಡಿ ಮಾರಾಠಿ,ತಂದೆ ಜಾತಿ ಶೂದ್ರ ಮಾರಾಠಿ ಅಥವಾ ಮರಾಠ ಎಂಬುದಾಗಿ ನಮೂದಾಗಿರುತ್ತದೆ. ಮರಾಠಿ ಜಾತಿ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗುವಂತೆ ಸೂಕ್ತ ಆದೇಶ ಹೊರಡಿಸುವಂತೆ ಮನವಿ ಸಲ್ಲಿಸಿದರು.

ಶಿರಸಿ ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿರುವ ಅರೇರಾ ಸಮುದಾಯವು ಮರಾಠಿ ಸಮುದಾಯಕ್ಕೆ ಒಳಪಡುವುದರಿಂದ ಅತ್ಯಂತ ಹಿಂದುಳಿದ ಈ ಸಮುದಾಯಗಳ ಆರ್ಥಿಕ ಹಾಗೂ ಸಾಮಾಜಿಕ ಕಲ್ಯಾಣಕ್ಕೆ ಮರಾಠ ಉಪಜಾತಿಯಲ್ಲಿ ಸೇರ್ಪಡೆಗೊಳ್ಳಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷರಾದ ಶ್ರೀ  ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮರಾಠ ಸಮುದಾಯದ ಪ್ರಮುಖರು ಹಾಗೂ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶ್ರೀ ಎಲ್.ಟಿ.ಪಾಟೀಲ್, ಮಂಡಲಾಧ್ಯಕ್ಷರಾದ ಶ್ರೀ ನಾಗಭೂಷಣ ಹಾವಣಗಿ, ಪ್ರಮುಖರಾದ ಶ್ರೀ ದೇವು ಪಾಟೀಲ್, ಶ್ರೀ ವಿಶ್ವನಾಥ ಹಾದಿಮನಿ,  ಮರಾಠ ಸಮುದಾಯದ ಪ್ರಮುಖರು, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

...

.

...

.