...

2 ಸಾವಿರಕ್ಕೂ ಅಧಿಕ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಯಶಸ್ವಿಗೊಂಡ ಮುಂಡಗೋಡ ಕಾರ್ಯಕರ್ತರ ಸಮಾವೇಶ 

ಮುಂಡಗೋಡ ಸೆ, 10 : ಮುಂಡಗೋಡ ಮಂಡಲದ ವತಿಯಿಂದ ಆಯೋಜಿಸಿದ್ದ ಮಂಡಲ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಬೂತ್ ಅಧ್ಯಕ್ಷರ, ಬೂತ್ ಉಸ್ತುವಾರಿಗಳ ಸಮಾವೇಶವನ್ನು ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಮುಂದಿನ ಎರಡು ತಿಂಗಳುಗಳ ಒಳಗಾಗಿ ಮುಂಡಗೋಡ ತಾಲೂಕಿನ ರೈತಾಪಿ ವರ್ಗಕ್ಕೆ ಬಲ ನೀಡುವ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಈ ಯೋಜನೆಯಿಂದ ಈ ಭಾಗದ ರೈತರು ಆರ್ಥಿಕ ಬೆಳೆಗಳನ್ನು ಬೆಳೆಯುದಕ್ಕೆ ಅನೂಕುಲವಾಗಲಿದೆ ಹಾಗೂ ಪಕ್ಷದ ಕಾರ್ಯಕರ್ತರು ಸರಕಾರದ ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ, ಮಂಡಲಾಧ್ಯಕ್ಷರಾದ ಶ್ರೀ ನಾಗಭೂಷಣ ಹಾವಣಗಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರು ಎಸಳೆ, ಶ್ರೀ ಗುರುಪ್ರಸಾದ ಹೆಗಡೆ, ಶ್ರೀಮತಿ ಉಷಾ ಹೆಗಡೆ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶ್ರೀ ರವಿಗೌಡ ಪಾಟೀಲ್, ಶ್ರೀ ಎಲ್.ಟಿ.ಪಾಟೀಲ್, ಮಂಡಲ ಪ್ರದಾನ ಕಾರ್ಯದರ್ಶಿ ಶ್ರೀ ವಿಠ್ಠಲ್ ಬಾಳಂಬೀಡ, ಶ್ರೀ ಮಂಜುನಾಥ ಪಾಟೀಲ್, ಪ್ರಮುಖರಾದ ಶ್ರೀ ಉಮೇಶ್ ಬಿಜಾಪುರ, ಶ್ರೀ ಗುಡ್ಡಪ್ಪ ಕಾತೂರ ಹಾಗೂ ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಜಿಲ್ಲಾಸ್ತರದ ಪದಾಧಿಕಾರಿಗಳು, ವಿವಿಧ ಮೋರ್ಚಾದ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಬೂತ್ ಉಸ್ತುವಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

...

.

...

.