...

ಮುಂಡಗೋಡ ಸೆಪ್ಟೆಂಬರ್ 06 :  ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ತಹಶೀಲ್ದಾರ್ ಕಚೇರಿಯ ಕಾರ್ಯಾಲಯದಲ್ಲಿ ಅಧಿಕಾರಿಗಳೊಂದಿಗೆ " ಮಳೆ ಹಾನಿ ಮತ್ತು ಪ್ರಗತಿ ಪರಿಶೀಲನಾ " ಸಭೆ ನಡೆಸಿದರು.

ಅತಿವೃಷ್ಟಿ ಹಾನಿಗೊಳಗಾದ ಪ್ರದೇಶಗಳ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು,ಮನೆ ಹಾನಿ ಹಾಗೂ ರೈತರಿಗೆ ಪರಿಹಾರ ಕೊಡಿಸುವ ಕುರಿತು ಸುದೀರ್ಘವಾಗಿ ಚರ್ಚಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಶ್ರೀ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶ್ರೀ ರವಿ ಗೌಡ ಪಾಟೀಲ್, ಶ್ರೀ ಎಲ್.ಟಿ.ಪಾಟೀಲ್, ಪ.ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಜಯಸುಧಾ ಬೋವಿ, ಉಪಾಧ್ಯಕ್ಷರಾದ ಶ್ರೀ ಶ್ರೀಕಾಂತ ಸಾನು, ಪ್ರಮುಖರಾದ ಶ್ರೀ ಉಮೇಶ್ ಬಿಜಾಪುರ, ಶ್ರೀ ಗುಡ್ಡಪ್ಪ ಕಾತೂರ ತಹಶೀಲ್ದಾರ್ ಶ್ರೀ ಶಂಕರ ಗೌಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

...

.

...

.