...

ಬನವಾಸಿ ಸೆಪ್ಟೆಂಬರ್ 05 : ಮಾನ್ಯ ಕಾರ್ಮಿಕ ಖಾತೆ  ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಇಂದು ತಾಲೂಕಿನ ಅಂಡಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಬ್ಬತ್ತಿ ಗ್ರಾಮದಲ್ಲಿ ಅತಿವೃಷ್ಟಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತರ ಅಹವಾಲನ್ನು ಸ್ವೀಕರಿಸಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಸುಮಾರು 49 ಕುಟುಂಬಸ್ಥರಿಗೆ ತಾತ್ಕಾಲಿಕ ಪರಿಹಾರ ಧನದ  ಆದೇಶ ಪತ್ರವನ್ನು ವಿತರಿಸಿ, ತುರ್ತಾಗಿ ಹಾನಿಗೊಳಗಾದ ಪ್ರದೇಶ ಸರ್ವೇ ಕಾರ್ಯವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಮಂಜುನಾಥ ನಾಯ್ಕ, ಶ್ರೀ ಪ್ರಶಾಂತ ಸಂತೊಳ್ಳಿ, ಸ್ಥಳೀಯ ಪ್ರಮುಖರಾದ ಶ್ರೀ ದ್ಯಾಮಣ್ಣ ದೊಡ್ಮನಿ, ಶ್ರೀಮತಿ ಮಂಗಲಾ ನಾಯ್ಕ, ಉಪ ಆಯುಕ್ತ ದೇವರಾಜ್, ತಹಶೀಲ್ದಾರ್ ಶ್ರೀಧರ ಮುಂದಲಮನಿ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.

...

.

...

.