...

ಯಲ್ಲಾಪುರ ಸೆಪ್ಟೆಂಬರ್ 05 : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ದೇವಿ ಮೈದಾನ ಹಾಗೂ ಮಂಜುನಾಥ ನಗರದಲ್ಲಿ  ಸ್ಥಳೀಯ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಿರುವ ಶ್ರೀ ಗಣಪತಿ ಮೂರ್ತಿ ಯ ದರ್ಶನವನ್ನು ಪಡೆದು, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ನಂತರ ದೇವಿ ಮೈದಾನದ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ವತಿಯಿಂದ ಆಯೋಜಿಸಿದ್ದ " ಅನ್ನ ಸಂತರ್ಪಣೆ " ಕಾರ್ಯಕ್ರಮದಲ್ಲಿ ಭಾಗಿಯಾಗಿ, ಭಕ್ತಾಧಿಗಳೊಂದಿಗೆ ತಾವು ಸಹ ಬೆರೆತು ಅನ್ನಪ್ರಸಾದವನ್ನು ಬಡಿಸುವ ಕಾರ್ಯದಲ್ಲಿ ಪಾಲ್ಗೊಂಡರು.

...
...